ಟಾರ್ಪಾಲಿನ್ -
ಮುಖ್ಯವಾಗಿ ಮಳೆ ಹೊಡೆತದ ಎದುರು ರಕ್ಷಣೆ ಒದಗಿಸಲು ಉಪಯೋಗಿಸುವ ತೂಕವಾದ, ವಿವಿಧ ತಿರುಚು ಎಳೆಗಳಿಂದ ಸುಭದ್ರವಾಗಿ ನೇಯ್ದ ವಸ್ತ್ರ. ಸಾಧಾರಣವಾಗಿ ಬಲಿಷ್ಠ ಲಿನನ್ನಿನಿಂದ ಇಲ್ಲವೇ ಸೆಣಬಿನ ನಾರಿನಿಂದ ಇಲ್ಲವೇ ದಪ್ಪ ಹತ್ತಿ ನೂಲಿನಿಂದ ಇದನ್ನು ತಯಾರಿಸುತ್ತಾರೆ. ಜಲರಕ್ಷಣೆ ಒದಗಿಸಲು ಇದಕ್ಕೆ ತಾರನ್ನು ಬಳಿಯುವುದುಂಟು. ವಸ್ತು, ಬಂಡಿ ಮುಂತಾದವುಗಳಿಗೆ ವ್ಯಾಪಕವಾದ ಹಚ್ಚಡವಾಗಿ ಟಾರ್ಪಾಲಿನ್ನಿನ ಉಪಯೋಗವಿದೆ.							*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ